4th January 2025
ಬಂಗಾರಪೇಟೆ: ತಾಲ್ಲೂಕಿನ ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹೊಸಹಳ್ಳಿ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ದಿಡೀರ್ ಕುಸಿತಗೊಂಡಿದ್ದು,ಅವಶೇಷಗಳ ಅಡಿಯಲ್ಲಿ ಸಿಲುಕಿದ ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಸದರಿ ಅಂಗನವಾಡಿಯಲ್ಲಿ ೧೩ ವಿದ್ಯಾರ್ಥಿಗಳಿದ್ದು, ಇಂದು ೬ಜನ ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಂತೆಯೆ ಅಂಗನವಾಡಿ ಕಟ್ಟಡವು ಹಳೇಯದಾಗಿದ್ದು, ಮೇಲ್ಚಾವಣಿ ಕುಸಿಯು ಹಂತದಲ್ಲಿತ್ತು. ಇದನ್ನು ಗಮನಿಸದ ಅಂಗನವಾಡಿ ಕಾರ್ಯಕರ್ತೆ ಅದೇ ಕಟ್ಟಡದಲ್ಲಿ ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು, ದುರಾದುಷ್ಠವಷಾತ್ ಇದ್ದಕ್ಕಿದ್ದಂತೆ ಮೇಲ್ಚಾವಣಿ ಕುಸಿಯಲಾರಂಬಿಸಿದೆ. ಲಾಸ್ಯ,ಲಿಖಿತ ಒಳಗೊಂಡ0ತೆ ಇನ್ನು ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನಿಬ್ಬರ ವಿದ್ಯಾರ್ಥಿಗಳಿಗೆ ಕಾಲು ತೊಡೆಯ ಭಾಗದಲ್ಲಿ ಮೂಳೆ ಮುರಿದಿದ್ದು, ತಕ್ಷಣ ಸ್ಥಳೀಯರು ಬಂಗಾರಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೂಳೆ ಮುರಿದಿದ್ದ ಇಬ್ಬರೂ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದೆ.
ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿಕೊಟ್ಟು ಮಕ್ಕಳ ಯೋಗ ಕ್ಷೇಮವನ್ನು ವಿಚಾರಿಸಿ ಮಕ್ಕಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವಂತೆ ವೈದ್ಯರಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತು ಶಸ್ತç ಚಿಕಿತ್ಸೆ ತಗಲುವ ಎಲ್ಲಾ ವೆಚ್ಚವನ್ನು ಸರ್ಕಾರ ಭರಿಸಲಿದೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ.ಹಾಗೂ ಸಿಡಿಪಿಎಓ ಮುನಿರಾಜು ಅವರಿಗೆ ಎಲ್ಲಾ ಅಂಗನವಾಡಿ ಕಟ್ಟಡಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.ಮಾಹಿತಿ ಬಂದ ನಂತರ, ಶಿಥಿಲಗೊಂಡ ಕಟ್ಟಡಗಳ ದುರಸ್ಥಿಕಾರ್ಯ ಮಾಡಲಾಗುವುದು, ಮತ್ತು ನಿರ್ಲಕ್ಷ ವಹಿಸಿದ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತ್ತು ಪಡಿಸಬೇಕೆಂದು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳಾದ ಭಾರತಿ, ಮೂಳೆ ತಜ್ಞ ಸುಧಾಕರ್, ಸಿಡಿಪಿಓ ಮುನಿರಾಜು, ಕೆಡಿಎ ಅಧ್ಯಕ್ಷ ಗೋಪಾಲರೆಡ್ಡಿ,ಪಿಡಿಓ ಭಾಸ್ಕರ್, ಮೊದಲಾದವರು ಇದ್ದರು.
undefined